
These poems are aimed to help the mothers who are interested
in teaching either kannada OR english Rhymes at home.
These poems are written in simple language and simple words.
Some of the poems can be sung. this helps to keep the
child more active and also keeps away from MISCHIEF!!!!
೧.ಹಾಲುಗೆನ್ನೆಯ ಚೂಪುಗಲ್ಲದ
ಹವಳದ ತುಟಿಯ ರೇಶಿಮೆ ಕೂದಲ
ಕಪ್ಪು ಕಣ್ಣಿನ ದುಂಡುಮೊಗದ
ಅಮ್ಮನ ಮುದ್ದುಮಗು ಯಾರು?
ನಾನು..ನಾನು..ನಾನು..

೨.ಒಂದು ಎರಡು ಬಾಳೆ ಎಲೆ ಹರಡು
ಮೂರು ನಾಕು ಅನ್ನ ಹಾಕು
ಐದು ಆರು ಬೇಳೆಸಾರು
ಏಳು ಎಂಟು ಪಲ್ಯಕೆ ದಂಟು
ಒಂಭತ್ತು ಹತ್ತು ಎಲೆ ಮುದಿರೆತ್ತು
೩.ಅಮ್ಮನಲ್ಲಿರುವುದು ’ಅ’
ಆಟವಾಡಿದರೆ ಬರುವುದು ’ಆ’
ಇಲಿಯಲ್ಲಿರುವುದೆ ’ಇ’
ಈಶ್ವರನೆಂದರೆ ’ಈ’
ಉಪ್ಪುತಿಂದರೆ ’ಉ’
ಊರಿಗೆ ಹೋದರೆ ’ಊ’
ಋಷಿಯಬಳಿಯಿದೆ ’ಋ
ೠ ವ ಮರೆತರು ಎಲ್ಲ
ಎಮ್ಮೆಯನ್ನು ಹುಡುಕಿದರೆ ’ಎ’
ಅಮ್ಮ ರೇಗಿದರೆ ’ಏ’
ಒಂದನು ಎಣಿಸಿದರೆ ’ಒ’
ಓಲೆ ಯಲ್ಲಿರುವುದೆ ’ಓ’
ಅಂಗಡಿಯಲ್ಲಿ ಸಿಗುವುದು ’ಅಂ’
ಮಕ್ಕಳು ನಗಲು ’ಅಃ’
೩.ಮನೆ ಮನೆ ಮುದ್ದು ಮನೆ
ಮನೆಮನೆ ನನ್ನ ಮನೆ
ಅಮ್ಮ ಮುದ್ದುಕೊಟ್ಟ ಮನೆ
ಅಪ್ಪ ಎತ್ತಿಕೊಂಡ ಮನೆ
ನನ್ನ ಗೆಳೆಯರೊಡನೆ ಕೂಡಿ
ಮುದ್ದು ಮಾತುಗಳನು ಆಡಿ
ನಲಿಯುತ್ತಿದ್ದ ನನ್ನ ಮನೆ.
೪.ಚುಕ್ಕೆ ಚುಕ್ಕೆ ತಾರೆ ಆಕಾಶದಲ್ಲಿ
ಚುಕ್ಕೆಗಳ ನಡುವೆ ಚಂದ್ರ
ನಕ್ಕು ನಲಿಯುತ್ತಾನೆ
ನೋಡಿ ನಮ್ಮ ಪುಟ್ಟನ
೫. ಚಂದಕ್ಕಿ ಮಾಮ,ಚಕ್ಕುಲಿಮಾಮ
ಮುತ್ತಿನ ಕುಡಿಕೆ ,ಕೊಡು ಕೊಡು ಮಾಮ
ನಾನೂ ನೀನೂ ಇಬ್ಬರು ಜೋಡಿ
ನನ್ನಯ ಗೆಳೆಯರನೆಲ್ಲ ಕೂಡಿ
ಬೆಳದಿಂಗಳ ಇಲ್ಲಿ ತರೋಣ
ಚಿಕ್ಕಿ ಚಿತ್ರ ಬರೆಯೋಣ
ಚಂದಕ್ಕಿ ಮಾಮ ಚಕ್ಕುಲಿ ಮಾಮ
೬.ಬಣ್ಣದ ಬಣ್ಣದ ಬುಗುರಿ
ಚಿಣ್ಣರ ಚೆನ್ನರ ಬುಗುರಿ
ಹಳದಿ ನೀಲಿ ಹಸಿರು ಕೆಂಪು
ಬಣ್ಣಗ ಬುಗುರಿ
೭.ನವಿಲೆ ನವಿಲೆ ಬಣ್ಣದ ನವಿಲೆ
ಬಣ್ಣಬಣ್ಣದ ಗರಿಗಳ ನವಿಲೆ
ಬೇಗನೆ ಬಂದು ಜಾಗರವಾಡು
ಮಳೆರಾಯನನ್ನು ಬರಮಾಡು
೮.ನಮಸ್ಕಾರ ಎಲ್ಲರಿಗೆ
ಹೇಗಿದ್ದೀರಿ ನೀವು?
ಚೆನ್ನಗಿದ್ದೇವೆ ನಾವು
ವಂದನೆಗಳು ನಿಮಗೆ
೯.ಇದ್ದವು ಮರದಲಿ ಹಕ್ಕಿಗಳೆರಡು
ಒಂದು ಪುಟ್ಟ ಇನ್ನೊಂದು ಕಿಟ್ಟ
ಕಿಟ್ಟ ಕಿಟ್ಟ ಹಾರಿಹೋಗು
ಪುಟ್ಟ ಪುಟ್ಟ ಹಾರಿಹೋಗು
ಕಿಟ್ಟ ಕಿಟ್ಟ ಹಿಂದಕೆ ಬಾ
ಪುಟ್ಟ ಪುಟ್ಟ ಹಿಂದಕೆ ಬಾ
೧೦.ತೆಗೆ ಮುಚ್ಚು,ತೆಗೆ ಮುಚ್ಚು
ತೆಗೆ ಮುಚ್ಚು,ತೆಗೆ ಮುಚ್ಚು
ಚಪ್ಪಾಳೆ ತಟ್ಟು
ತೆಗೆ ಮುಚ್ಚು, ತೆಗೆ ಮುಚ್ಚು
ತೆಗೆ ಮುಚ್ಚು,ತೆಗೆ ಮುಚ್ಚು
ತೊಡೆಯ ಮೇಲಿಟ್ಟು
ಕೈಗಳ ಸುತ್ತು,ಕೈಗಳ ಸುತ್ತು
ಕೈಗಳ ಸುತ್ತು,ಕೈಗಳ ಸುತ್ತು
ಒಂದರಿಂದೊಂದನು ದೂರಿಟ್ಟು
ಕೈಗಳ ಸುತ್ತು,ಕೈಗಳ ಸುತ್ತು
ಕೈಗಳ ಸುತ್ತು,ಕೈಗಳ ಸುತ್ತು
ನಿನ್ನನ್ನು ನೀನೆ ತಬ್ಬಿಟ್ಟು

ನಾಯಿಮರಿ
ನಾಯಿಮರಿ ನಾಯಿಮರಿ ತಿಂಡಿಬೇಕೆ?
ನಾಯಿಮರಿ ನಾಯಿಮರಿ ತಿಂಡಿಬೇಕೆ?
ತಿಂಡಿಬೇಕು ತೀರ್ಥಬೇಕು ಎಲ್ಲಬೇಕು
ನಾಯಿಮರಿ ನಾಯಿಮರಿ ನಿನಗೆ ತಿಂಡಿ ಏಕೆಬೇಕು?
ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು
ನಾಯಿಮರಿ ನಾಯಿಮರಿ ಕಳ್ಳಬಂದರೇನು ಮಾಡುವೆ?
ಲೊಳ್ ಲೊಳ್ ಬೌ ಎಂದು ಕೂಗಿಯಾಡುವೆ
ಜಾಣಮರಿ ನಾನು ಹೋಗಿ ತಿಂಡಿ ತರುವೆನು
ತಾ ನಾ ನಿನ್ನ ಮನೆಯ ಕಾಯುತಿರುವೆನು

ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ
ಬೆಕ್ಕೇಬೆಕ್ಕೇ ಮುದ್ದಿನಸೊಕ್ಕೇ ಎಲ್ಲಿಗೆ ಹೋಗಿದ್ದೆ?
ಕರೆದರು ಇಲ್ಲ ಹಾಲೂಬೆಲ್ಲ ಕಾಯಿಸಿ ಇಟ್ಟಿದ್ದೆ
ಕೇಳೋ ಕಳ್ಳ ಮುದ್ದಿನ ಮಾಳ್ಳ ಮೈಸೂರರಮನೆಗೆ
ರಾಜನ ಸಂಗಡ ರಾಣಿಯು ಇದ್ದಳು ಅಂತಃಪುರದೊಳಗೆ
ಬೆಕ್ಕೇ ಬೆಕ್ಕೇ ಬೇಗನೆ ಹೇಳೆ ನೋಡಿದ ಆನಂದ
ರಾಣಿಯ ಮಂಚದ ಕೆಳಗೇ ಕಂಡೆನು
ಚಿಲಿ ಪಿಲಿ ಇಲಿಯೊಂದ